ಮತ್ತಿ (ಅರ್ಜುನ, ಬಿಳಿಮತ್ತಿ) ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ಸಸ್ಯ. ಅರ್ಜುನ ಮರವು ಟರ್ಮಿನಲಿಯಾ ಕುಟುಂಬಕ್ಕೆ ಸೇರಿದೆ. ಇದನ್ನು ಸಾಮಾನ್ಯವಾಗಿ ಅರ್ಜುನ್ ಮರ, ಥಲ್ಲಾ ಮಡ್ಡಿ, ಕುಂಬಕ್, ಮಧು ಮರಣ ಮತ್ತು ನೀರೂ ಮಾರುತು ಎಂದು ಕರೆಯಲಾಗುತ್ತದೆ. ಕಾಡುಬಾದಾಮಿ ಮರದ ಹತ್ತಿರದ ಸಂಬಂಧಿ ಇದು. ಇತರೆ ಹೆಸರು: ಥಲ್ಲಾ ಮಡ್ಡಿ (ತೆಲುಗು), ಕುಂಬಕ್ (ಸಿಂಹಳ), ಹೋಲ್ ಮ್ಯಾಥಿ, ಅರ್ಜುನ ಮರ == ಸಸ್ಯ ವಿವರಣೆ == ಅರ್ಜುನ ಮರವು ೨೦-೨೫ಮೀ ಎತ್ತರವಿರುತ್ತದೆ. ಇದು ದೊಡ್ಡಗಾತ್ರದ ಅಗಲಹಂದರದ ನಿತ್ಯಹಸುರಿನ ಮರ. ಸಾಮಾನ್ಯವಾಗಿ ಬಟ್ರೆಸ್ಟೆಡ್ ಕಾಂಡವನ್ನು ಹೊಂದಿರುತ್ತದೆ. ಶಂಕುವಿನಾಕಾರದ ಎಲೆಗಳನ್ನು ಹೊಂದಿದೆ. ಇದರ ಎಲೆಗಳು ಹಸಿರು ಬಣ್ಣದಲ್ಲಿರುತ್ತದೆ. ಎಲೆಯ ಕೆಳಭಾಗವು ಕಂದು ಬಣ್ಣದಲ್ಲಿರುತ್ತದೆ. ನಯವಾದ ಬೂದು ತೊಗಟೆಯನ್ನು ಹೊಂದಿದೆ. ಇದರಲ್ಲಿ ಮಾರ್ಚ್ ಮತ್ತು ಜೂನ್ ನಡುವೆ ಕಾಣುವ ಹಳದಿ ಬಣ್ಣದ ಹೂವುಗಳು ಬೆಳೆಯುತ್ತವೆ. ಇದರ ಕಾಂಡದ ಬುಡಭಾಗ ಅಗಲವಾದ ಏಣುಗಳಾಗಿ ಹರಡಿರುತ್ತದೆ. ತೊಗಟೆ ಮಂದವಾಗಿದೆ; ಇದರ ಬಣ್ಣ ಬೂದು ಇಲ್ಲವೆ ನಸುಗೆಂಪು ಮಿಶ್ರಿತವಾದ ಹಸುರು. ತೆಳುಸಿಪ್ಪೆಗಳ ರೂಪದಲ್ಲಿ ಸುಲಿದುಕೊಳ್ಳುತ್ತದೆ. ಎಲೆಗಳು ಸರಳ, ದೀರ್ಘವೃತ್ತಾಕಾರದವು. ಹೆಚ್ಚು ಕಡಿಮೆ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಸಣ್ಣವು, ಪ್ಯಾನಿಕಲ್ ಮಾದರಿಯ ಹೂ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಫಲಗಳ ಮೈ 5-7 ರೆಕ್ಕೆ ರಚನೆಗಳಿಂದ ಕೂಡಿದೆ. == ಕೃಷಿ == ಇದು ಸ್ವಾಭಾವಿಕವಾಗಿ ಬೀಜಗಳ ಮೂಲಕ ವೃದ್ಧಿಯಾಗುತ್ತದೆ. ಕೃತಕವಾಗಿ ಬೆಳೆಸುವುದು ಗೆಲ್ಲುಗಳ ಸಹಾಯದಿಂದ. == ಬೆಳೆಯುವ ಪ್ರದೇಶ == ಭಾರತಾದ್ಯಂತ ಕಾಣದೊರೆಯುತ್ತದಾದರೂ ತಮಿಳುನಾಡು, ಪಶ್ಚಿಮ ಕರಾವಳಿ, ಒರಿಸ್ಸ, ಪಂಜಾಬ್, ಉಪಹಿಮಾಲಯ ಪ್ರದೇಶಗಳಲ್ಲಿ ಇದರ ಬೆಳವಣಿಗೆ ಹೆಚ್ಚು. ಅರ್ಜುನ ಮರ ಬಾಂಗ್ಲಾದೇಶ, ಉತ್ತರಪ್ರದೇಶ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಸಾಮಾನ್ಯವಾಗಿ ನದಿಯ ದಡಗಳಲ್ಲಿ ಅಥವಾ ಶುಷ್ಕ ನದಿ ಹಾಸಿಗೆಗಳ ಬಳಿ ಬೆಳೆಯುತ್ತದೆ. ಹಳ್ಳತೊರೆಗಳ ಅಂಚುಗಳಲ್ಲಿ, ಸಡಿಲಬಗೆಯ ಗೋಡು ಮೆಕ್ಕಲು ಮಣ್ಣುಗಳಿರುವ ತಾಣಗಳಲ್ಲಿ ಸ್ವಾಭಾವಿಕವಾಗಿ ಹುಲುಸಾಗಿ ಬೆಳೆಯುತ್ತದೆ. ಇದನ್ನು ತಮಿಳು ಭಾಷೆಯಲ್ಲಿ ಮಠಿಮಾರಾ, ಮಲಯಾಳಂನಲ್ಲಿ 'ಮಾರುತ ಮಾರಮ್' (ಮಾರುತಮ್ ಪ್ಯಾಟೈ), ತಮಿಳಿನಲ್ಲಿ ತೆಲ್ಲಾ ಮಡ್ಡಿ (ತೆಳು ಮಡಿ) ಎಂದು ಕರೆಯಲಾಗುತ್ತದೆ. == ಉಪಯೋಗಗಳು == ನೆರಳಿಗಾಗಿ, ಅಲಂಕಾರಕ್ಕಾಗಿ ಇದನ್ನು ಬೆಳೆಸುವುದು ಉಂಟು. ಇದರ ಚೌಬೀನೆ ಅಲ್ಪಬಾಳಿಕೆಯದು ಮತ್ತು ಸಂಸ್ಕರಿಸಲು ಕಷ್ಟಸಾಧ್ಯವಾದ್ದು. ಆದರೂ ಗಾಡಿ, ಕೃಷಿ ಉಪಕರಣ, ನೀರಿನ ಬಾನಿ, ಗಣಿ ಆಸರೆಕಂಬ ಮುಂತಾದವುಗಳ ತಯಾರಿಕೆಗೆ ಬಳಕೆಯಾಗುತ್ತದೆ. ಇದರಿಂದ ಪ್ಲೈವುಡ್, ಆಲಂಕಾರಿಕ ಹಲಗೆಗಳನ್ನೂ ತಯಾರಿಸುವುದುಂಟು. ಬಿಳಿ ಮತ್ತಿಯ ತೊಗಟೆಯನ್ನು ಧರ್ಮ ಹದಗಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. === ರೇಷ್ಮೆ ಉತ್ಪಾದನೆ === ಅರ್ಜುನವು ಆಂಥೆರಿಯಾ ಪ್ಯಾಫಿಯಾ ಪತಂಗವುಳ್ಳ ಎಲೆಗಳನ್ನು ಕೊಡುವ ಜಾತಿಗಳಲ್ಲಿ ಒಂದಾಗಿದೆ. ಇದು ಟಸ್ಸರ್ ರೇಷ್ಮೆಯನ್ನು ಉತ್ಪಾದಿಸುತ್ತದೆ. ಇದೊಂದು ವಾಣಿಜ್ಯ ಪ್ರಾಮುಖ್ಯತೆಯ ಒಂದು ಕಾಡು ರೇಷ್ಮೆ. === ಬೌದ್ಧ ಧರ್ಮದಲ್ಲಿ === ಥೇರವಾಡದ ಬೌದ್ಧ ಧರ್ಮದಲ್ಲಿ ಅರ್ಜುನ ಮರದ ಉಲ್ಲೇಖವಿದೆ. === ಔಷಧೀಯ ಬಳಕೆ === ವಾಗ್ಭಟ ಕ್ರಿ.ಶ. ೭ನೇ ಶತಮಾನಲ್ಲಿ ಹೃದಯ ರೋಗದ ಚಿಕಿತ್ಸೆಗಾಗಿ ಅರ್ಜುನವನ್ನು ಆಯುರ್ವೇದದಲ್ಲಿ ಪರಿಚಯಿಸಲಾಯಿತು. ಇದನ್ನು ಸಾಂಪ್ರದಾಯಿಕವಾಗಿ ಹಾಲಿನ ಕಷಾಯದಂತೆ ತಯಾರಿಸಲಾಗುತ್ತದೆ. ಪ್ರಾಚೀನ ಭಾರತೀಯ ವೇದಗಳಲ್ಲಿ ಇದರ ಉಲ್ಲೇಖವಿದೆ. ಗಾಯಗಳು, ರಕ್ತಸ್ರಾವ ಮತ್ತು ಹುಣ್ಣುಗಳ ಚಿಕಿತ್ಸೆಯಲ್ಲಿ ಅರ್ಜುನ ಮರವನ್ನು ಬಳಸುತ್ತಾರೆ. ಇದರ ತೊಗಟೆಯನ್ನು ತಂಪುಗೊಳಿಸುವಿಕೆಗಾಗಿ ಮೂತ್ರಪ್ರತಿಬಂಧಕವಾಗಿ ಹೃದಯದ ರಕ್ತಪೂರೈಕೆಗಾಗಿ ಕಾಮೋತ್ತೇಜಕವಾಗಿ. ಹಣ್ಣನ್ನು ಯಕೃತ್[೧] ಸಮಸ್ಯೆ, ಮೂಳೆ ಮುರಿತ, ಅಧಿಕ ರಕ್ತದೊತ್ತಡ [೨] ಸಮಸ್ಯೆಗಳಿಗೆ ಬಳಸಲಾಗುತ್ತದೆ. == ಉಲ್ಲೇಖ ==